ಬೆಂಜನಪದವು: ನೂತನ ವಿದ್ಯಾಸಂಸ್ಥೆ “ಎಡ್ವೆಂಚರ್” ಇದರ ನಾಮಕರಣ ಹಾಗೂ ಲಾಂಛನ ಬಿಡುಗಡೆ ಸಮಾರಂಭ. ಶಿಕ್ಷಣದಿಂದ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾದ್ಯ: ಓಡಿಯೂರು ಶ್ರೀ

ಬಂಟ್ವಾಳ :ಸದಾಶಿವ ಶಿಕ್ಷಣ ಪ್ರತಿಷ್ಠಾನ ರಿ ಇದರ ಅಶ್ರಯದಲ್ಲಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆಯಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿರುವ ನೂತನ ವಿದ್ಯಾಸಂಸ್ಥೆಯ ನಾಮಕರಣ ಹಾಗೂ ಲಾಂಛನ ಬಿಡುಗಡೆ ಸಮಾರಂಭವು ಅ. 22ರಂದು ಬುಧವಾರ ಬೆಳಿಗ್ಗೆ ಬೆಂಜನಪದವು ಶುಭಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ಇವರು ನೂತನ ವಿದ್ಯಾ ಸಂಸ್ಥೆಗೆ “ಎಡ್ವೆಂಚರ್” (EDUVENTURE) ಎನ್ನುವ ನಾಮಕರಣದೊಂದಿಗೆ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿದರು, ಬಳಿಕ ಆಶೀರ್ವಾಚನ ನೀಡಿ, ಕ್ಷಣ ಕ್ಷಣ ಕಲಿಯುವುದೇ ಶಿಕ್ಷಣ, […]